ಬಳ್ಳಾರಿ ಕೋಟೆ ಬೆಟ್ಟದ ಮೇಲೆ ನಿರ್ಮಿಸಲಾಗಿದೆ.ಇದನ್ನು ಬಳ್ಳಾರಿ ಗುಡ್ಡ ಅಥವಾ ಫೋರ್ಟ್ ಹಿಲ್ ಎಂದು ಕರೆಯುತ್ತಾರೆ.ಇದು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಐತಿಹಾಸಿಕ ನಗರದಲ್ಲಿದೆ. ಇದನ್ನು ಎರಡು ಭಾಗಗಳಲ್ಲಿ ನಿರ್ಮಿಸಲಾಯಿತು, ಮೇಲು ಕೋಟೆ ಮತ್ತು ಕೆಳ ಕೋಟೆ.ಮೇಲಿನ ಕೋಟೆಯನ್ನು ವಿಜಯನಗರ ಸಂಸ್ಥಾನದ ಸಾಮಂತ ರಾಜನಾಗಿದ್ದ ಹನುಮಂತ ನಾಯಕ ಎಂಬುವವನು ಕಟ್ಟಿಸಿದನು.ಮತ್ತು ಕೆಳ ಕೋಟೆ 18 ನೇ ಶತಮಾನದ ನಂತರದ ಭಾಗದಲ್ಲಿ ಹೈದರ್ ಅಲಿಯಿಂದ ನಿರ್ಮಿಸಲ್ಪಟ್ಟಿತು.ಕೆಳ ಕೋಟೆಯನ್ನು ವಾಸ್ತುಶಿಲ್ಪಿ ಮತ್ತು ನಿರ್ಮಾಪಕರಾಗಿದ್ದ ಫ್ರೆಂಚ್ ಎಂಜಿನಿಯರ್ ನಿಂದ ನಿರ್ಮಿಸಲ್ಪಟ್ಟಿತು ಮತ್ತು ಮೇಲಿನ ಕೋಟೆಯನ್ನು ನವೀಕರಿಸಿದರು.ಕೋಟೆಗಳು ಶ್ರೀಮಂತ ಇತಿಹಾಸದೊಂದಿಗೆ ಹಲವಾರು ಐತಿಹಾಸಿಕ ಮತ್ತು ಧಾರ್ಮಿಕ ಸ್ಮಾರಕಗಳೊಂದಿಗೆ ಉತ್ತಮವಾದ ದಾರಿಗಳನ್ನು ಹೊಂದಿವೆ. == ಗ್ಯಾಲರಿ == == ಉಲ್ಲೇಖಗಳು ==